ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಖಾಸಗಿ ಸಾರಿಗೆ ಸಂಘಟನೆಗಳ ಬಂದ್ ರಾಜಕೀಯ ಪ್ರೇರಿತ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದರು.
September 11, 2023
ಬೆಂಗಳೂರಿನಲ್ಲಿ ಸೋಮವಾರ ಮಾತನಾಡಿ, ಖಾಸಗಿ ವಾಹನದವರು ಬಂದ್ ಮಾಡುವ ಅವಶ್ಯಕತೆ ಇಲ್ಲ. ಖಾಸಗಿ ಬಸ್ಸಿನವರಿಗೆ ಸ್ವಲ್ಪ ತೊಂದ್ರೆಯಾಗಿದೆ. ಅದು ಎಲ್ಲರಿಗೂ ಗೊತ್ತಿರುವ ವಿಚಾರ. ಊಬರ್-ಓಲಾ ಆಟೋ, ಟ್ಯಾಕ್ಸಿ ಚಾಲಕರ ಪ್ರತಿಭಟನೆ ಬಹುಶಃ ಅದು ರಾಜಕೀಯ ಪ್ರೇರಣೆಯಿಂದ ಎಂದರು.
ಆದರೂ ನಾವು ಅವರ ಬಗ್ಗೆ ಬಹಳ ಸಿಂಪಥಿಯಿಂದ ಇದ್ದೇವೆ. ಆದ್ರೆ ಹೆದರಿಸೋದು ಹಾಗೂ ಪ್ರಯಾಣಿಕರಿಗೆ ತೊಂದರೆ ಮಾಡೋದ್ರಿಂದ ಅವರಿಗೆ ಒಳ್ಳೆದಾಗಲ್ಲ. ಸರ್ಕಾರ ಅವರ ಬೇಡಿಕೆಗೆ ಸ್ಪಂದಿಸುತ್ತದೆ. ಯಾವ ರೀತಿ ಅವರಿಗೆ ಸಹಕಾರ ಮಾಡಬಹುದೋ ಎಂದು ಚಿಂತನೆ ಮಾಡುತ್ತದೆ ಎಂದರು.
