ಕರ್ನಾಟಕದ tax ಹಣ ಕೇರಳಕ್ಕೆ
ಬೆಂಗಳೂರು: ನಮ್ಮ tax ದುಡ್ಡು, ಕೇರಳಕ್ಕೆ (Kerala) ನೆರವು. ಇದು ರಾಜ್ಯ ಸರ್ಕಾರದ ನಿಲುವು. ಕಾಂಗ್ರೆಸ್ (Congress) ನಾಯಕಿ ಪ್ರಿಯಾಂಕಾ ಗಾಂಧಿ ಕ್ಷೇತ್ರಕ್ಕೆ ಕರ್ನಾಟಕ (Karnataka) ಸರ್ಕಾರ ನೆರವು ನೀಡುತ್ತಿದೆ.
ಪೂರಕ ಅಂದಾಜಿನಲ್ಲಿ ಕೇರಳ ರಾಜ್ಯದ ವಯನಾಡ್ (Wayanad) ಜಿಲ್ಲೆಯ ಮೆಪ್ಪಾಡಿ ಭೂಕುಸಿತ (Meppadi Landslide) ಕಾರಣದಿಂದ ಹಾನಿಗೊಳಗಾದವರ ಪುನರ್ವಸತಿಗೆ 10 ಕೋಟಿ ರೂ. ಕೊಡಲಾಗಿದೆ. ಭೂಕುಸಿತದಿಂದ ಹಾನಿಗೊಳಗಾದ 100 ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸಲು 10 ಕೋಟಿ ಅನುದಾನ ಎಂದು ಉಲ್ಲೇಕಿಸಿದ್ದಾರೆ.
ಕಂದಾಯ ಇಲಾಖೆ ಅಡಿಯಲ್ಲಿ ಬರುವ ಎಸ್‌ಡಿಆರ್‌ಎಫ್ ಅನುದಾನ ನೀಡುತ್ತಿರುವುದಾಗಿ ಉಲ್ಲೇಖಿಸಿದೆ. ಆದರೆ ಪ್ರಿಯಾಂಕ ಗಾಂಧಿ ಸಂಸದೆಯಾಗಿರುವ ವಯನಾಡ್ ಕ್ಷೇತ್ರದ ಮೆಪ್ಪಾಡಿ ಹಾನಿಗೆ ರಾಜ್ಯ ಸರ್ಕಾರ ಹಣ ನೀಡುತ್ತಿರುವುದು ಸಾಕಷ್ಟು ಅನುಮಾನ ಚರ್ಚೆ ಗೆ ದಾರಿಯಾಗಿದೆ.
