ಅವಧಿಗೆ ಮೊದಲೇ ಸಾಲ ತೀರಿಸಿದರೆ ಇಲ್ಲ ಶುಲ್ಕ

Waves of Karnataka


 ತೀರಿಸಿದರೆ ದೊಡ್ಡ ಪ್ರಮಾಣದ ಬಡ್ಡಿ ಹಣ ಉಳಿತಾಯ ಆಗುತ್ತದೆ. ಆದರೆ ಬಹುತೇಕ ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಸಹಕಾರಿ ಬ್ಯಾಂಕ್‌ಗಳು ನಿಗಿದಿತ ಸಮಯಕ್ಕಿಂತ ಮೊದಲು ಸಾಲ ಮರುಪಾವತಿ-ಸಿದರೆ ಅಥವಾ ಭಾಗಶಃ ಸಾಲ ಕಟ್ಟಿದರೆ ದಂಡ ಹೇರುತ್ತವೆ. ಸಾಲ ಪಡೆದ ಗ್ರಾಹಕರಿಗೆ ಆಗುತ್ತಿರುವ ಈ ಸಮಸ್ಯೆ ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆ‌ಬಿಐ) 2026ರ ಜನವರಿಯಿಂದ ಸಾಲ ಮರುಪಾವತಿಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಆ ಹೊಸ ಮರುಪಾವತಿ ಪ್ರಕ್ರಿಯೆ ಸರಳಗೊಳ್ಳುವ ಜೊತೆಗೆ ಗ್ರಾಹಕನಿಗೆ ನಿಯಮದಿಂದಾಗಿ ಅನುಕೂಲವಾಗಲಿದೆ. ಸಾಲ

ಹೊಸ ನಿಯಮ ಏನು?: ಅರ್‌ಬಿಐನ ಹೊಸ ನಿಯಮದ ಪ್ರಕಾರ ಸಾಲ ಮರುಪಾವತಿ ಪ್ರಕ್ರಿಯೆ ಇನ್ನಷ್ಟು ಸರಳವಾಗಲಿದೆ. ಬದಲಾಗುವ ಬಡ್ಡಿ ದರದಲ್ಲಿ (ಫ್ಲೋಟಿಂಗ್ ಇಂಟರೆಸ್ಟ್ ರೇಟ್) ಪಡೆದ ವಿವಿಧ ಸಾಲಗಳನ್ನು ಅವಧಿಗೂ ಮುನ್ನ ಕಟ್ಟಿದಾಗ ವಿಧಿಸುವ ದಂಡವನ್ನು ಆರ್‌ಬಿಐ  ಮಾಡಲಿದೆ. ಆರ್‌ಬಿಐ ಹೇಳಿರುವಂತೆ ಎಲ್ಲ ವಾಣಿಜ್ಯ ಬ್ಯಾಂಕ್‌ಗಳು (ಪೇಮೆಂಟ್ಸ್ ಬ್ಯಾಂಕ್ ಹೊರತುಪಡಿಸಿ), ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ (ಆರ್‌ಆರ್‌ಬಿ), ಬ್ಯಾಂಕೇತರ ಹಣಕಾಸು ಕಂಪನಿ ಗಳು ಮತ್ತು ಸಹಕಾರಿ ಬ್ಯಾಂಕ್‌ಗಳಿಂದ ಪಡೆಯುವ ಸಾಲಗಳಿಗೆ ಈ ನಿಯಮ ಅನ್ವಯಿಸುತ್ತದೆ.

ಯಾರಿಗೆ ಅನುಕೂಲ?: ಬದಲಾಗುವ ಬಡ್ಡಿ ದರದಲ್ಲಿ ಪಡೆಯುವ ಗೃಹಸಾಲ, ವೈಯಕ್ತಿಕ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಗ್ರಾಹಕ ಬಳಕೆ ಉಪಕರಣಗಳ ಸಾಲ, ಉದ್ಯಮ ಚಟುವಟಿಕೆಗಳಿಗೆ ಸಂಬಂಧಿಸಿದ ಸಾಲವನ್ನು ಅವಧಿಗೆ ಮುಂಚಿತವಾಗಿ ಮರುಪಾವತಿಸಿದರೆ ಅಥವಾ ಆ ಸಾಲಗಳನ್ನು ಭಾಗಶಃ ಮರುಪಾವತಿ ಮಾಡಿದರೆ 2026ರ ಜನವರಿಯಿಂದ ದಂಡ ಕಟ್ಟಬೇಕಾಗಿ ಬರುವುದಿಲ್ಲ.

ದಂಡ ಶುಲ್ಕ?

ಈ ರೀತಿಯ ಸಾಲ ಪಡೆಯುವ ಎಲ್ಲರಿಗೂ ಹೊಸ ನಿಯಮದಿಂದ ಅನುಕೂಲ ಆಗಲಿದೆ. ಹೊಸ ಮಾನದಂಡದ ಪ್ರಕಾರ ಬದಲಾಗುವ ಬಡ್ಡಿ ದರದಲ್ಲಿ ಪಡೆಯುವ ಯಾವುದೇ ಸಾಲ ಮರುಪಾವತಿಗೆ ಲಾಕ್-ಇನ್ ಅವಧಿ ನಿಗದಿ ಮಾಡುವಂತಿಲ್ಲ. ಗ್ರಾಹಕ ತನ್ನ ಸ್ವಂತ ಹಣದಿಂದ, ಮತ್ತೊಂದು ಬ್ಯಾಂಕ್ ಆರ್ಥಿಕ ನೆರವು ಪಡೆದು ಅಥವಾ ಬ್ಯಾಲೆನ್ಸ್‌ ಟ್ರಾನ್ಸ್‌ಫರ್ (ಸಾಲವರ್ಗಾವಣೆ) ಮೂಲಕ ಅವಧಿಗೆ ಮೊದಲು ಸಾಲ ತೀರಿಸಲು ಮುಂದಾದಾಗ ಆತನಿಗೆ ದಂಡ ವಿಧಿಸುವಂತಿಲ್ಲ.

ವಾಣಿಜ್ಯೋದ್ಯಮಕ್ಕೆ ಪಡೆದ ಸಾಲ, ಕಿರು ಮತ್ತು ಸಣ್ಣ ಉದ್ಯಮ ಸಾಲ ಮತ್ತು ಸ್ಪೆಷಲ್ ಫೈನಾನ್ಸ್ ಸಾಲ ಪಡೆದವರಿಗೂ ಒಂದಷ್ಟು ಮಿತಿಗಳೊಂದಿಗೆ ಅನುಕೂಲ ಸಿಗಲಿದೆ.


ಯಾವ ಸಾಲಗಳಿಗೆ ಶುಲ್ಕ ಅನ್ವಯಿಸುತ್ತದೆ?: ಸ್ಥಿರ


ಬಡ್ಡಿ ದರದಲ್ಲಿ ಪಡೆಯುವ ಸಾಲಗಳಿಗೆ ಅವಧಿಗೂ ಮುನ್ನ ಮರುಪಾವತಿ ಶುಲ್ಕ (ಪ್ರಿಪೇಮೆಂಟ್ ಚಾರ್ಜಸ್) ಅನ್ವಯವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಸಾಲ ಮಂಜೂರಾತಿ ದಾಖಲೆಯಲ್ಲಿ ಅವಧಿಗೂ ಮುನ್ನ ಸಾಲ ಕಟ್ಟಿದರೆ ಶುಲ್ಕ ವಿಧಿಸುತ್ತೇವೆ ಎಂದು ನಿರ್ದಿಷ್ಟವಾಗಿ ಹೇಳಿದ್ದರೆ ಮಾತ್ರ ಶುಲ್ಕ ಹಾಕಬಹುದಾಗಿದೆ. ಇದಲ್ಲದೆ ಕೆಲವು ಸಂದರ್ಭಗಳಲ್ಲಿ ಸಣ್ಣ ಫೈನಾನ್ಸ್ ಬ್ಯಾಂಕ್‌ಗಳು, ಆರ್‌ಆರ್‌ಬಿಗಳು, ಸಹಕಾರಿ ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಪಡೆಯುವ ₹50 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಸಾಲವನ್ನು ಅವಧಿಗೆ ಮುನ್ನ ಮರುಪಾವತಿ ಮಾಡಿದರೂ ಬ್ಯಾಂಕ್‌ಗಳಿಗೆ ಶುಲ್ಕ ಹಾಕುವ ಸಾಧ್ಯತೆ ಇರುತ್ತದೆ.

ಏಕೆ ಈ ನಿಯಮಕ್ಕೆ ಮಹತ್ವ: ಎಷ್ಟೋ ಸಂದರ್ಭಗಳಲ್ಲಿ ಗ್ರಾಹಕರ ಕೈಯಲ್ಲಿ ಒಂದಿಷ್ಟು ಹಣವಿದ್ದಾಗ, ಅದನ್ನು ಬಳಸಿ ಸಾಲ ಮರುಪಾವತಿ ಮಾಡಲು ಹೋದರೆ ಬ್ಯಾಂಕ್‌ಗಳು ಅವಧಿಪೂರ್ವ ಮರುಪಾವತಿ ದಂಡ ಹಾಕುವುದಾಗಿ ಹೇಳುತ್ತಿದ್ದವು. ಇದರ ಪರಿಣಾಮವಾಗಿ, ಕೆಲವು ಗ್ರಾಹಕರು ಅವಧಿಗೆ ಮೊದಲೇ ಸಾಲ ಮರುಪಾವತಿಯಿಂದ ಹಿಂದೆ ಸರಿಯುತ್ತಿದ್ದರು. ಆದರೆ ಅರ್‌ಬಿಐನ ಈ ಹೊಸ ನಿಯಮದಿಂದ ಗ್ರಾಹಕರು ಸಾಲದ ಹೊರೆಯಿಂದ ಪಾರಾಗುವುದು ಸುಲಭವಾಗಲಿದೆ. ಕೈಯಲ್ಲಿ ದುಡ್ಡಿದ್ದಾಗ ಸಾಲದ ಬಾಬ್ರಿಗೆ ಹೆಚ್ಚುವರಿ ಮೊತ್ತ ಕಟ್ಟಿ ಸಾಲದಿಂದ ಬೇಗ ಹೊರಬರಲು ಸಾಧ್ಯವಾಗುತ್ತದೆ.