ರೇಣುಕಾಚಾರ್ಯರಿಗೆ ಗೊತ್ತಿದೆ ಆದ್ರೆ ವಿನಾಃ ಕಾರಣ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಅದನ್ನೇ ಮಾಡಿಕೊಂಡು ರೇಣುಕಾಚಾರ್ಯ ಹೋಗುತ್ತಿದ್ದಾರೆ

Waves of Karnataka


ಮಾಜಿ ಶಾಸಕ ರೇಣುಕಾಚಾರ್ಯ ವಿರುದ್ಧ ಎಂಎಲ್‌ಸಿ ಕೆ ಎಸ್‌ ನವೀನ್‌ ವಾಗ್ದಾಳಿ ನಡೆಸಿದ್ದಾರೆ. ರೇಣುಕಾಚಾರ್ಯರು ಹೇಳಿಕೆ ಇನ್ನೊಬ್ಬರ ವ್ಯಕ್ತಿತ್ವವನ್ನು ಡ್ಯಾಮೇಜ್ ಮಾಡುವುದು ಸರಿ ಅಲ್ಲ, ಅವರು ಕಳೆದ ಚುನಾವಣೆಯಲ್ಲಿ ಸೋತಿದ್ದಾರೆ ಎಂಬ ನೋವು ನಮಗೂ ಇದೆ..ಆದ್ರೆ ಸೋತ ನಂತರ ಅವರು ಕಾರಣ ಇವರು ಕಾರಣ ಎಂದು ದೂರುವುದು ಸರಿಯಲ್ಲ ಎಂದು ಹೇಳಿದರು.
ಅವರ ಎಲ್ಲಾ ಹೇಳಿಕೆಗಳು, ಇತರರ ಬಗ್ಗೆ ಆಡಿರುವ ಮಾತು ಲೇವಡಿಗಳನ್ನು ಪಕ್ಷ ಗಮನಿಸುತ್ತಿದೆ. ನಮ್ಮ ಪಕ್ಷದ ಶಿಸ್ತು ಸಮಿತಿ ಆಗುಹೋಗುಗಳು ರೇಣುಕಾಚಾರ್ಯರಿಗೆ ಗೊತ್ತಿದೆ ಆದ್ರೆ ವಿನಾಃ ಕಾರಣ ಮಾಧ್ಯಮಗಳ ಮುಂದೆ ಹೇಳಿಕೆಗಳನ್ನು ಕೊಡುವುದರಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತದೆ ಅದನ್ನೇ ಮಾಡಿಕೊಂಡು ರೇಣುಕಾಚಾರ್ಯ ಹೋಗುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಎಲ್ಲವು ಸರಿಹೋಗಬಹುದು ಎಂಬ ನಿರೀಕ್ಷೆ ಇದೆ. ಕಾಯ್ದುನೋಡಿ ಪಕ್ಷ ಯಾವ ತೀರ್ಮಾನ ತೆಗೆದುಕೊಂಡ್ರು ಅದಕ್ಕೆ ಸ್ವೀಕರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಎಂಎಲ್‌ಸಿ ಕೆಎಸ್  ನವೀನ್  ಪರೋಕ್ಷವಾಗಿ ಎಚ್ಚರಿಸಿದ್ದಾರೆ.