ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ಕೂಡಲೆ ಬಹಿರಂಗ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಯತ್ನಾಳ ಹೇಳಿಕೆಯಿಂದ ಪಕ್ಷಕ್ಕೆ ಆಗ್ತಿರೋ ಡ್ಯಾಮೇಜ್ ಕುರಿತು ಪ್ರತಿಕ್ರಿಸಲು ಜೋಶಿ ನಿರಾಕರಣೆ ಮಾಡಿದರು.
ಮುಸ್ಲಿಮರು ಕೂಡ ಭಾರತದ ಪ್ರಜೆಗಳು ಅವರ ಬಗ್ಗೆ ಬಿಜೆಪಿಗೆ ಗೌರವವಿದೆ. ಆದರೆ ಕಾಂಗ್ರೆಸ್ ತುಷ್ಟಿಕರಣ ಮಾಡುತ್ತಿದೆ. ವೋಟ್ ಬ್ಯಾಂಕಿಗಾಗಿ ರಾಮನ ಅಸ್ತಿತ್ವವನ್ನು ಪ್ರಶ್ನಿಸಿದವರು ಕಾಂಗ್ರೆಸ್ಸಿಗರು. ರಾಮ ಮಂದಿರದಲ್ಲಿ ಯಾವುದೇ ರಾಜಕಾರಣದ ವಿಷಯವಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
