ತಮ್ಮ ಸಿನಿಮಾಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ

Waves of Karnataka


 ದರ್ಶನ್ ಅಭಿನಯದ ಕಾಟೇರ ಸಿನಿಮಾ ದೊಡ್ಡಮಟ್ಟದಲ್ಲಿಯೇ  ಸಿದ್ದವಾಗಿದ್ದು, ದಾಸನ ಅಭಿಮಾನಿಗಳಿಗೆ ಹೊಸ ವರ್ಷಾಚರಣೆ ಸಂಭ್ರಮ ದುಪ್ಪಟ್ಟಾಗಲಿದೆ. ಈಗಾಗಲೇ  ದಾಖಲೆಯ ಟಿಕೆಟ್ ಬುಕ್ಕಿಂಗ್ ಆಗಿರುವ ಕಾಟೇರ ಸಿನಿಮಾ  ಬಾಕ್ಸ್ ಆಫೀಸ್ ದಾಖಲೆಗಳನ್ನು ಛಿದ್ರವಾಗಿಸಲು ರೆಡಿಯಾಗಿದೆ.

ನಾಯಕ ನಟನ ಜೀವನದಲ್ಲಿ ಬಾಕ್ಸ್  ಆಫೀಸ್ ಗೆಲುವು ಸಾಮಾನ್ಯ,  ಆದರೆ ದರ್ಶನ್ ಮಾಸ್ ಸಿನಿಮಾಗಳ ಹೀರೋ ಎಂದೇ ಪರಿಗಣಿಸಲ್ಪಟ್ಟಿದ್ದಾರೆ.

ತಮ್ಮ ಸಿನಿಮಾಗಳಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಸಮಸ್ಯೆಗಳನ್ನು ಎತ್ತಿ ತೋರಿಸುವ ಕೆಲಸ ಮಾಡುತ್ತಿದ್ದಾರೆ. ಅವರ ಹಿಂದಿನ ಚಲನಚಿತ್ರಗಳಾದ ಯಜಮಾನ- ತೈಲ ಮಾಫಿಯಾ ಮತ್ತು ಕ್ರಾಂತಿ - ಶೈಕ್ಷಣಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದವು, ಇದು ಅವರ ಸಾಮಾಜಿಕ ಪ್ರಜ್ಞೆಗೆ ಸಾಕ್ಷಿಯಾಗಿದೆ.