ಸಭ್ಯತೆ ಅಂದರೆ ಏನು ಎಂಬುವುದನ್ನು ಮೊದಲು ಕಾಂಗ್ರೆಸ್ ನವರು ತಿಳಿದುಕೊಳ್ಳಲಿ ಎಂದು ಸಂಸದ ಅನಂತ ಕುಮಾರ್​ ಹೆಗಡೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.

Waves of Karnataka


 ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನಡುವಿವ ವಾದ-ವಿವಾದ ಹೆಚ್ಚಾಗುತ್ತಿದೆ. ನನ್ನ ಮಾತನ್ನು ವಿರೋಧಿಸುವವರು ನನ್ನ ಮುಂದೆ ಬಂದು ಸಂಸ್ಕೃತಿ ಬಗ್ಗೆ ಚರ್ಚೆ ಮಾಡಲಿ. ಅವರಿಗೆ ಸಭ್ಯತೆ ಅಂದರೆ ಏನು ಎಂದು ನಾನು ಪಾಠ ಮಾಡುತ್ತೇನೆ. ಸಂಸ್ಕೃತಿ ಬಗ್ಗೆ ಸಿದ್ದರಾಮಯ್ಯ ನನ್ನ ಎದುರು ಬಂದು ಮಾತನಾಡಲಿ. ಏನೂ ಮಾತನಾಡಬೇಕು ಅಂತ ನಾನು ಹೇಳುತ್ತೇನೆ. ಯಾರಿಗೆ ಯಾವ ಭಾಷೆಯಲ್ಲಿ ಹೇಗೆ ಮಾತಾಡಬೇಕು ಹಾಗೆ ಮಾತಾಡಬೇಕು. ಸಭ್ಯತೆ ಅಂದರೆ ಏನು ಎಂಬುವುದನ್ನು ಮೊದಲು ಕಾಂಗ್ರೆಸ್ ನವರು ತಿಳಿದುಕೊಳ್ಳಲಿ ಎಂದು ಸಂಸದ ಅನಂತ ಕುಮಾರ್​ ಹೆಗಡೆ ಮತ್ತೊಮ್ಮೆ ವಾಗ್ದಾಳಿ ನಡೆಸಿದ್ದಾರೆ.