ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
January 07, 2024
ಬಾಬ್ರಿ ಮಸೀದಿ ಇದ್ದ ಜಾಗದಲ್ಲಿ ಇಂದು ಭವ್ಯ ರಾಮಮಂದಿರ ನಿರ್ಮಾಣವಾಗುತ್ತಿದೆ. ಇದೇ ಜನವರಿ 22ರಂದು ರಾಮನ ಪ್ರಾಣ ಪ್ರತಿಷ್ಠಾಪನೆಯೂ ನಡೆಯುತ್ತಿದೆ. ಇನ್ನೊಂದು ವರ್ಷದಲ್ಲಿ ಮಥರಾ ಹಾಗೂ ಕಾಶಿ ದೇವಸ್ಥಾನದ ಪಕ್ಕದಲ್ಲಿರುವ ಮಸೀದಿ ಧ್ವಂಸಗೊಳ್ಳುತ್ತದೆ ಎಂದು ಬಿಜೆಪಿ ನಾಯಕ ಕೆಎಸ್ ಈಶ್ವರಪ್ಪ ಹೇಳಿದ್ದಾರೆ.
ಬೆಳಗಾವಿಯ ಉಚ್ಚಗಾವಿಯಲ್ಲಿ ನಡೆದ ಹಿಂದೂ ಸ್ನೇಹ ಸಮ್ಮೇಳನದಲ್ಲಿ ಮಾಡಿದ ಕೆಎಸ್ ಈಶ್ವರಪ್ಪ, ದೇವಸ್ಥಾನಗಳಲ್ಲಿ ಹಿಂದೂಗಳ ಜೀವವಿದೆ ಎಂದು ಮುಸ್ಲಿಂ ದೊರೆಗಳಿಗೆ ಗೊತ್ತಿತ್ತು. ಹೀಗಾಗಿ ಮಂದಿರಗಳನ್ನು ಕೆಡವಿದರೆ ಭಾರತ ನಮ್ಮದಾಗುತ್ತೆಂದು ಮುಸ್ಲಿಂ ದೊರೆಗಳು ಭಾವಿಸಿದ್ದರು. ಕಾಶಿ ವಿಶ್ವನಾಥನ ದೇವಸ್ಥಾನ ಮಥುರ ದೇವಸ್ಥಾನಗಳನ್ನು ಅರ್ಧ ಕೆಡವಿ ಮಸೀದಿ ನಿರ್ಮಿಸಿದ್ದರು.
