ಪವನ್ ಕಲ್ಯಾಣ್ ವಿರುದ್ಧ ರಾಮ್ ಗೋಪಾಲ್ ವರ್ಮಾ ಆಂಧ್ರದ ಪೀಠಾಪುರಂ ಕ್ಷೇತ್ರದಲ್ಲಿ ಸ್ಪರ್ಧೆ
March 14, 2024
ಆಂಧ್ರಪ್ರದೇಶದ ಪೀಠಾಪುರಂ ಕ್ಷೇತ್ರದಿಂದ ಚಿತ್ರನಟ ಹಾಗೂ ಜನಸೇನಾ ನಾಯಕ ಪವನ್ ಕಲ್ಯಾಣ್ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೇ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರೂ ಅದೇ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಕುರಿಂತೆ ಅವರು ಮಾಡಿರುವ ಟ್ವೀಟ್ ಅವರ ಅಭಿಮಾನಿಗಳು ಹಾಗೂ ಪವನ್ ಕಲ್ಯಾಣ್ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ. ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ಮಾಧ್ಯಮಗಳ ಮುಂದೆ ಬೈದಾಡಿಕೊಳ್ಳುತ್ತಿದ್ದ ಈ ಇಬ್ಬರೂ ಚುನಾವಣೆಗೆ ಪರಸ್ಪರ ಸ್ಪರ್ಧಿಸಿದರೆ ಅದು ಪೀಠಾಪುರಂ ಕ್ಷೇತ್ರಕ್ಕೆ ರಂಗೇರಿಸುವುದಲ್ಲಿ ಅಚ್ಚರಿಯೇನಿಲ್ಲ.
