ಲೋಕಸಭಾ ಚುನಾವಣೆಯ ನಾಮಿನೇಷನ್‌ಗೆ ಇನ್ನೂ ಬಹಳ ಸಮಯ ಇದೆ, ಅಷ್ಟರಲ್ಲಿ ಈಶ್ವರಪ್ಪ ಮನವೊಲಿಕೆ: ಪ್ರಲ್ಹಾದ್ ಜೋಶಿ
March 17, 2024
: ಈಶ್ವರಪ್ಪ ಬಂಡಾಯ ಶಮನ ಆಗತ್ತೆ ಎಂದು ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಅವರು ಮಾತನಾಡಿದರು, ಈಶ್ವರಪ್ಪ ಅವರು ನಾಳೆ ಮೋದಿ ಅವರ ಕಾರ್ಯಕ್ರಮಕ್ಕೆ ಬರಬಹುದು ಎಂದ ಅವರು, ಈಶ್ವರಪ್ಪ ಮನವೊಲಿಕೆ ಮಾಡೋಕೆ ಬಹಳ ಸಮಯ ಇದೆ. ಚುನಾವಣೆಗೆ ಇನ್ನು 40 ದಿನ ಇದೆ. ನಾಮಿನೇಷನ್‌ಗೆ 20 ದಿನ ಬಾಕಿ ಇದೆ. ಅಷ್ಟರಲ್ಲಿ ಎಲ್ಲ ಸರಿ ಮಾಡುತ್ತೇವೆ ಎಂದರು.
ಬೆಳಗಾವಿಗೆ ಜಗದೀಶ್ ಶೆಟ್ಟರ್ ಹೆಸರು ಮುಂಚೂಣಿಯಲ್ಲಿದ್ದು, ರಾಷ್ಟ್ರೀಯ ನಾಯಕರ ತೀರ್ಮಾನ ಮುಂದಿನದು. ಆದರೆ, ಶೆಟ್ಟರ್ ಹೆಸರೇ ಮುಂಚೂಣಿಯಲ್ಲಿದೆ ಎಂದರು.
ಇನ್ನು ಕುಮಾರಸ್ವಾಮಿ ಗೃಹ ಸಚಿವರು, ನಡ್ಡಾ ಭೇಟಿ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೂರು ಸೀಟ್ ಕೇಳಿದ್ದಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅವರು ಕೇಳೋದು ಸಹಜವಾಗಿದೆ. ಅಲ್ಲಿ ಏನು ಚರ್ಚೆ ಆಗಿದೆ ಅನ್ನೋದು ಗೊತ್ತಾಗಿಲ್ಲ. ನಾನು ಕುಮಾರಸ್ವಾಮಿ ಅವರ ಜೊತೆ ಮಾತಾಡಿಲ್ಲ ಎಂದರು.
ನಾನು ಅಧಿಕೃತವಾಗಿ ಇಂದು ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದ ಜೋಶಿ. ಇವತ್ತು ಬೊಮ್ಮಾಯಿ ನಾವು ಸಭೆ ಮಾಡ್ತೀದ್ದೀವಿ. ಮುಂಬೈ ಕರ್ನಾಟಕದಲ್ಲಿ ಎಲ್ಲ ಸೀಟ್ ಗೆಲ್ಲಬೇಕು. ಇವತ್ತು ಒಟ್ಟು ನಾಲ್ಕು ಸಭೆ ಮಾಡುತ್ತೇವೆ ಎಂದರು.
