ಲೋಕಸಭೆ ಚುನಾವಣೆ 2024ಕ್ಕೆ ಬಿಜೆಪಿ ತನ್ನ 3ನೇ ಪಟ್ಟಿ ಬಿಡುಗಡೆ ಮಾಡಿದ್ದು, 9 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಣೆ ಮಾಡಿದೆ
ಡಾ.ತಮಿಳ್ ಸಾಯಿ ಸೌಂದರ್ಯರಾಜನ್, ಈ ಹಿಂದೆ ತೆಲಂಗಾಣದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಸದ್ಯ ಚೆನೈ ದಕ್ಷಿಣ ಲೋಕಸಭಾ ಡಾ. ತಮಿಳ್ ಸಾಯಿ ಸೌಂದರ್ಯರಾಜನ್ ಚುನಾವಣೆ ಸ್ಪರ್ಧೆ ಮಾಡಲಿದ್ದಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಉದ್ದೇಶದಿಂದಾಗಿಯೇ ಅವರು ರಾಜ್ಯಪಾಲರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಎಲ್ . ಮುರುಗನ್ ನೀಲಗಿರಿ ಕ್ಷೇತ್ರದಿಂದ, ಕನ್ಯಾಕುಮಾರಿಯಿಂದ ಪೊನ್ನು ರಾಧಾಕೃಷ್ಣನ್ ಸ್ಪರ್ಧೆ ಮಾಡುತ್ತಿದ್ದಾರೆ.
ಕ್ಷೇತ್ರಗಳು - ಅಭ್ಯರ್ಥಿಗಳು
ಚೆನ್ನೈ ದಕ್ಷಿಣ - ತಮಿಳಸಾಯಿ ಸೌಂದರರಾಜನ್.
ಚೆನ್ನೈ ಕೇಂದ್ರ - ವಿನೋಜ್ ಪಿ ಸೆಲ್ವಂ
ವೆಲ್ಲೂರು - ಷಣ್ಮುಗಂ
ಕೃಷ್ಣಗಿರಿ - ಸಿ ನರಸಿಂಹನ್
ನೀಲಗಿರೀಸ್ - ಡಾ.ಎಲ್.ಮುರುಗನ್.
ಕೊಯಮತ್ತೂರು - ಅಣ್ಣಾಮುಲೈ.
ಪೆರಂಬಲೂರು -ಪಾರಿವೆಂದರ್
ತೂತುಕುಡಿ - ಎನ್ ನಾಗೇಂದ್ರನ್
ಕನ್ಯಾಕುಮಾರ್ - ರಾಧಾಕೃಷ್ಣನ್
