ಸೋಲುವ ಭಯದಿಂದ ಖರ್ಗೆ ಚುನಾವಣೆಯಿಂದ ದೂರ: ಕಲಬುರಗಿಯಲ್ಲಿ ಆರ್‌. ಅಶೋಕ್‌ ವ್ಯಂಗ್ಯ

Waves of Karnataka


 ಕರ್ನಾಟಕದಲ್ಲಿ ಶ್ಯಾಡೋ ಸಿಎಂಗಳಿದ್ದಾರೆ. ಎಲ್ಲರೂ ಮೀನಿಗೆ ಗಾಳ ಹಾಕೊಂಡು ಕೂತಿದ್ದಾರೆ. ಸಿದ್ದರಾಮಯ್ಯ ಬೀಳುತ್ತಿದ್ದ ಹಾಗೆ ಎಳೆಯುತ್ತಾರೆ. ಡಿಕೆಶಿ, ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೇರಿದಂತೆ ಸಾಕಷ್ಟು ಜನ ಬಲೆ ಹಿಡಿದುಕೊಂಡು ಕೂತಿದ್ದಾರೆ. ಕಾಂಗ್ರೆಸ್‌ನ್ನು ಆ ಪಕ್ಷದವರೇ ಮುಗಿಸುತ್ತಾರೆ. ನಾವು ಆಪರೇಷನ್‌ ಕಮಲ ಮಾಡಬೇಕು, ಪಕ್ಷ ಮುಗಿಸಬೇಕು ಅಂತ ಏನೂ ಮಾಡುತ್ತಿಲ್ಲ. ಸಿದ್ದರಾಮಯ್ಯ ಬಿದ್ದ ತಕ್ಷಣ ಸಿಎಂ ಆಗಬೇಕು ಅಂತಾ ಕನಸು ಕಾಣುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ನವರೇ ಸಾಕು ಅವರ ಸರಕಾರ ಬೀಳಿಸೋದಕ್ಕೆ' ಎಂದು ಅಶೋಕ್ ವ್ಯಂಗ್ಯವಾಡಿದರು.