ಅವಿವಾಹಿತ ಬ್ರಿಜೇಶ್ ಚೌಟ ಬಳಿ ಇಲ್ಲ ಕೋಟಿ ಕೋಟಿ ಆಸ್ತಿ! ಸಾಲ ಮಾಡಿ ಕಾರು ಖರೀದಿ

Waves of Karnataka


 ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಈಗ ನಾಮಪತ್ರ ಸಲ್ಲಿಕೆ ಶುರುವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರವನ್ನು ಸಲ್ಲಿಸುತ್ತಿದ್ದಾರೆ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ (Dakshina Kannada Lok Sabha constituency) ಬಿಜೆಪಿ ಅಭ್ಯರ್ಥಿ (BJP Candidate) ಕ್ಯಾಪ್ಟನ್​ ಬ್ರಿಜೇಶ್ ಚೌಟಾ (Brijesh Chowta) ಶುಕ್ರವಾರ (ಮಾ. 29) ಸಾಂಕೇತಿಕವಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ಅವರು ಸಲ್ಲಿಸಿದ ಅಫಿಡವಿಟ್‌ನಲ್ಲಿ ತಾವು 70 ಲಕ್ಷ ರೂಪಾಯಿ ಒಡೆಯ ಎಂದು ಘೋಷಿಸಿಕೊಂಡಿದ್ದಾರೆ. ಅಲ್ಲದೆ, ತಮ್ಮ ಬಳಿ ಇರುವ ಕಾರನ್ನು ಸಾಲ ಮಾಡಿ ತೆಗೆದುಕೊಂಡಿದ್ದಾಗಿ 42 ವರ್ಷದ ಬ್ರಿಜೇಶ್‌ ಹೇಳಿದ್ದಾರೆ. ಇವರು ಏಪ್ರಿಲ್‌ 4ರಂದು ಅಧಿಕೃತವಾಗಿ ನಾಮಪತ್ರವನ್ನು ಸಲ್ಲಿಸುವುದಾಗಿ ಹೇಳಿದ್ದಾರೆ