ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರಕ್ಕೂ ನಾಡದ್ರೋಹಿ ಎಂಇಎಸ್ ಎಂಟ್ರಿ ಕೊಟ್ಟಿದೆ.
April 10, 2024
ಬೆಳಗಾವಿಯಿಂದ (Belagavi) ಹಾಗೂ ಇದೇ ಮೊದಲ ಬಾರಿಗೆ ಕೆನರಾದಿಂದ (Canara) ಲೋಕಸಭೆ ಚುನಾವಣೆ (Lok Sabha Election 2024) ಕಣಕ್ಕೆ ಇಳಿಯುವ ದಾಷ್ಟ್ಯವನ್ನು ನಾಡದ್ರೋಹಿ ಸಂಘಟನೆ ಮಹಾರಾಷ್ಟ್ರ ಏಕೀಕರಣ ಸಮಿತಿ (Maharashtra Ekikaran Samiti – MES) ತೋರಿಸಿದೆ. ಬೆಳಗಾವಿ ಹಾಗೂ ಕೆನರಾ ಎರಡೂ ಲೋಕಸಭೆ ಕ್ಷೇತ್ರಗಳಿಂದ ಎಂಇಎಸ್‌ನಿಂದ ಇಬ್ಬರು ಸ್ಪರ್ಧಿಸಲು ಮುಂದಾಗಿದ್ದಾರೆ.
ಇದೇ ಮೊದಲ ಬಾರಿಗೆ ಕೆನರಾ ಲೋಕಸಭಾ ಕ್ಷೇತ್ರಕ್ಕೂ ನಾಡದ್ರೋಹಿ ಎಂಇಎಸ್ ಎಂಟ್ರಿ ಕೊಟ್ಟಿದೆ. ಬೆಳಗಾವಿ ಹಾಗೂ ಕೆನರಾ ಎರಡೂ ಲೋಕಸಭೆ ಕ್ಷೇತ್ರಗಳಿಂದ ಸ್ಪರ್ಧೆಗೆ ಎಂಇಎಸ್ ನಿರ್ಧರಿಸಿದ್ದು, ಎರಡೂ ಕ್ಷೇತ್ರಗಳಿಗೆ ಒಮ್ಮತದ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ.
