ಈಶ್ವರಪ್ಪನವರ ಉದ್ಧಟತನದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ; ಬಿ.ವೈ. ವಿಜಯೇಂದ್ರ ಕಿಡಿ

Waves of Karnataka


 ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ತಮ್ಮ ಪುತ್ರನಿಗೆ ಟಿಕೆಟ್‌ ಕೈತಪ್ಪಿದ ಸಂಬಂಧ ಬಂಡಾಯ ಎದ್ದಿರುವ ಮಾಜಿ ಡಿಸಿಎಂ ಕೆ.ಎಸ್.‌ ಈಶ್ವರಪ್ಪ (KS Eshwarappa) ನಾಳೆ (ಶುಕ್ರವಾರ – ಏಪ್ರಿಲ್‌ 12) ನಾಮಪತ್ರ ಸಲ್ಲಿಸಲು ಸಜ್ಜಾಗಿದ್ದಾರೆ. ಈ ನಡುವೆ ಅವರು ನರೇಂದ್ರ ಮೋದಿ (PM Narendra Modi) ಫೋಟೊ ಇಟ್ಟುಕೊಂಡು ಪ್ರಚಾರ ಮಾಡುವುದರ ವಿರುದ್ಧ ದೂರು ನೀಡಲಾಗಿದೆ. ಇದರ ಜತೆಗೆ ಬಿಜೆಪಿ ನಾಯಕರು ಮೋದಿ ಭಾವಚಿತ್ರವನ್ನು ಹಾಕದೇ ಪ್ರಚಾರ ಮಾಡಲಿ ಎಂಬ ಕೆಇಎಸ್‌ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತಿರುಗೇಟು ನೀಡಿದ್ದಾರೆ. ಈಶ್ವರಪ್ಪನವರ ಉದ್ಧಟತನದ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲ್ಲ ಎಂದು ಗುಡುಗಿದ್ದಾರೆ.