ಸಾಲು ಸಾಲು ರಜೆ; ಮತದಾನಕ್ಕೆ ಚಕ್ಕರ್ ಹಾಕಿ, ಔಟಿಂಗ್ ಹೋದ್ರೆ ಬರುತ್ತೆ ನೋಟಿಸ್

Waves of Karnataka


 ಲೋಕಸಭಾ ಚುನಾವಣೆಯ (Lok Sabha Election 2024 ) ಮತದಾನಕ್ಕೆ ದಿನ ಸಮೀಪಿಸುತ್ತಿದ್ದಂತೆ ಚುನಾವಣಾ ಆಯೋಗ ಹಾಗೂ ಬಿಬಿಎಂಪಿ ಅಧಿಕಾರಿಗಳು ಕೊನೆ ಹಂತದ ತಯಾರಿ ನಡೆಸುತ್ತಿದ್ದಾರೆ. ಇದರೊಟ್ಟಿಗೆ ಬೆಂಗಳೂರಲ್ಲಿ ಮತದಾನ ಪ್ರಮಾಣ (Voting Awareness) ಹೆಚ್ಚಿಸಲು ಈ ಬಾರಿಯೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ನಿಟ್ಟಿನಲ್ಲಿ ವಿಧಾನಸಭೆ ಚುನಾವಣೆಯಲ್ಲೂ ಬಿಬಿಎಂಪಿ ಸಕ್ರಿಯ ಪಾತ್ರವನ್ನು ವಹಿಸಿತ್ತು. ಇದೀಗ ಏಪ್ರಿಲ್‌ 26ರಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿನೂತನ ಮಾರ್ಗ ಕಂಡುಕೊಂಡಿದೆ.

ಸಾಲು ಸಾಲು ರಜೆ ಇದೆ ಎಂದು ಮತದಾನ ಮಾಡುವುದು ಬಿಟ್ಟು ಐಟಿಬಿಟಿ ಉದ್ಯೋಗಿಗಳು ಔಟಿಂಗ್ ಹೋದರೆ ನೋಟಿಸ್ ಬರುವುದು ಖಂಡಿತ. ಮತದಾನ ಜಾಗೃತಿ ಬೆನ್ನಲ್ಲೇ ಬಿಬಿಎಂಪಿ ಬಿಸಿ ಮುಟ್ಟಿಸಲು ಮುಂದಾಗಿದೆ. ಐಟಿಬಿಟಿ ಕಂಪನಿಗಳ ಜತೆಗೆ ಸಮನ್ವಯತೆಯೊಂದಿಗೆ ಕಡ್ಡಾಯ ಮತದಾನಕ್ಕೆ ಕ್ರಮವಹಿಸಲಾಗುತ್ತಿದೆ.