ವಾರಾಣಸಿಯಲ್ಲಿ ಮೋದಿ ವಿರುದ್ಧ ಬಿಎಸ್‌ಪಿ ಅಭ್ಯರ್ಥಿ ಯಾರು? ಗ್ಯಾಂಗ್‌ಸ್ಟರ್ ಪತ್ನಿಗೂ ಟಿಕೆಟ್!
April 15, 2024
ದೇಶದ ಹಲವು ರಾಜ್ಯಗಳಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನಕ್ಕೆ ಮೂರು ದಿನ ಬಾಕಿ ಇರುವಾಗಲೇ ಬಹುಜನ ಸಮಾಜ ಪಕ್ಷವು (BSP List) 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲೂ, ವಾರಾಣಸಿಯಲ್ಲಿ (Varanasi) ನರೇಂದ್ರ ಮೋದಿ ಅವರ ವಿರುದ್ಧ ಅಥರ್ ಜಮಾಲ್ ಲರಿ (Athar Jamal Lari) ಅವರನ್ನು ಮಾಯಾವತಿ (Mayawati) ಅವರು ಕಣಕ್ಕಿಳಿಸಿದ್ದಾರೆ. ಮತ್ತೊಂದೆಡೆ, ಕೊಲೆ, ಸುಲಿಗೆ, ಅಪಹರಣ ಸೇರಿ ಹಲವು ಪ್ರಕರಣಗಳ ಆರೋಪಿ, ಜೈಲುಪಾಲಾಗಿರುವ ಗ್ಯಾಂಗ್‌ಸ್ಟರ್ ಧನಂಜಯ್ ಸಿಂಗ್ ಪತ್ನಿಗೂ ಬಿಎಸ್‌ಪಿ ಟಿಕೆಟ್ ಘೋಷಿಸಿದೆ.
