ಅಮಿತ್ ಶಾ ʼಬೂತ್ʼ ಮಂತ್ರ; ಕರ್ನಾಟಕ ಗೆಲ್ಲೋಕೆ ಮಾಡಿದ್ರು ಚಾಣಕ್ಯ ತಂತ್ರ!
April 02, 2024
ಲೋಕಸಭಾ ಚುನಾವಣೆಗೆ (Lok Sabha Election 2024) ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೇ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸುತ್ತಿದ್ದಾರೆ. ಈ ನಡುವೆ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕರ್ನಾಟಕಕ್ಕೆ ಭೇಟಿ ನೀಡಿದ್ದು, ರಾಜಕೀಯ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಮೈತ್ರಿ ನಾಯಕರಿಗೆ ಕೆಲವು ಟಾಸ್ಕ್‌ಗಳನ್ನು ಸಹ ಅಮಿತ್ ಶಾ (Amt Shah) ನೀಡಿದ್ದಾರೆ. ಅಲ್ಲದೆ, ಪ್ರತಿ ದಿನ ರಾಜ್ಯದ ಸ್ಥಿತಿ – ಗತಿ ಬಗ್ಗೆ ಗ್ರೌಂಡ್ ರಿಪೋರ್ಟ್ (Political Ground Report) ಪಡೆಯುತ್ತಿರುವುದಾಗಿ ಹೇಳಿರುವ ಶಾ, ನಾಯಕರಿಗೆ ಬೂತ್ ಕಾರ್ಯಕರ್ತರ ಒಗ್ಗಟ್ಟಿನ ಟಾಸ್ಕ್ ಕೊಟ್ಟಿದ್ದಾರೆ. ಅಂದರೆ, ಪ್ರತಿ ನಾಯಕರು ಆಯಾ ಬೂತ್‌ಗಳಲ್ಲಿನ ಕಾರ್ಯಕರ್ತರ ಮನವೊಲಿಸಬೇಕು, ಎಲ್ಲರೂ ಒಂದಾಗಿ ಮತ ಕೇಳಬೇಕು. ಈ ನಿಟ್ಟಿನಲ್ಲಿ ಎಲ್ಲರ ಕಾರ್ಯ ಸಾಗಲಿ ಎಂಬ ಕಿವಿ ಮಾತನ್ನು ಹೇಳಿದ್ದಾರೆ.
Tags
