ಕಾಂಗ್ರೆಸ್ ಪ್ರಣಾಳಿಕೆ ಪಾಕಿಸ್ತಾನದ ಜನರಿಗೆ ಹೆಚ್ಚು ಸೂಕ್ತ: ಹಿಮಂತ ಬಿಸ್ವಾ ಶರ್ಮಾ
April 23, 2024
ಕಾಂಗ್ರೆಸ್ (congress) ಪಕ್ಷ ಪಾಕಿಸ್ತಾನದಲ್ಲಿ (pakistan) ಚುನಾವಣೆ (election) ಗೆಲ್ಲುವ ತಯಾರಿ ಮಾಡಿದಂತಿದೆ. ರಾಹುಲ್ ಗಾಂಧಿ (rahul gandhi) ಅವರು ಪ್ರಧಾನಿ (PM) ಅಭ್ಯರ್ಥಿಯಾಗಲು ಸೂಕ್ತವೇ ಎಂದು ಪ್ರಶ್ನಿಸಿರುವ ಅಸ್ಸಾಂ (assam) ಮುಖ್ಯಮಂತ್ರಿ (cm) ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಅವರು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಟೀಕಿಸಿ ರಾಹುಲ್ ಗಾಂಧಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪ್ರಧಾನಿ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ಸಂಭಾವ್ಯ ಉಮೇದುವಾರಿಕೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಹುಲ್ ಗಾಂಧಿ ಪಪ್ಪುಗೆ ಉತ್ತಮ ಅಭ್ಯರ್ಥಿ ಎಂದು ಹೇಳಿದರು.
