ರಾಜ್ಯದಲ್ಲಿ ಕಾಂಗ್ರೆಸ್-‌ ಜೆಡಿಎಸ್‌ (Congress- JDS) ಮೈತ್ರಿಕೂಟ ಸರ್ಕಾರ ರಚಿಸಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಸಿಎಂ ಆಗಿಸಿದ್ದೇ ನಾನು

Waves of Karnataka


 ರಾಜ್ಯದಲ್ಲಿ ಕಾಂಗ್ರೆಸ್-‌ ಜೆಡಿಎಸ್‌ (Congress- JDS) ಮೈತ್ರಿಕೂಟ ಸರ್ಕಾರ ರಚಿಸಿ ಎಚ್‌.ಡಿ ಕುಮಾರಸ್ವಾಮಿ (HD Kumaraswamy) ಅವರನ್ನು ಸಿಎಂ ಆಗಿಸಿದ್ದೇ ನಾನು. ಈಗ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡ, ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಟೀಕಿಸಿದ್ದಾರೆ. ಈ ಬಾರಿ (Lok Sabha Election 2024) ಒಕ್ಕಲಿಗರಿಗೆ (vokkaligas) 8 ಟಿಕೆಟ್‌ ನೀಡಿದ್ದೇವೆ, ನೀವೇ ಗೆಲ್ಲಿಸಿಕೊಳ್ಳಬೇಕು ಎಂದು ಜಾತಿ ಕಾರ್ಡ್‌ ಪ್ಲೇ ಮಾಡಿದ್ದಾರೆ.

ಒಕ್ಕಲಿಗರ ಮತಬೇಟೆಗೆ ಖುದ್ದು ಫೀಲ್ಡ್‌ಗಿಳಿದಿರುವ ಡಿಸಿಎಂ ಡಿ.ಕೆ ಶಿವಕುಮಾರ್, ಮೈಸೂರಿನಲ್ಲಿ ನಡೆದ ಒಕ್ಕಲಿಗ ಸಭೆಯಲ್ಲಿ ಭಾಗವಹಿಸಿ ಈ ಮಾತುಗಳನ್ನು ಆಡಿದ್ದು, ಮೈತ್ರಿಕೂಟ ಸರ್ಕಾರ ರಚನೆಯಾದಾಗಿನ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ಜೊತೆಗೆ, ಒಕ್ಕಲಿಗ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಮೈಸೂರಿನ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಣ್‌ ಅವರನ್ನು ಗೆಲ್ಲಿಸುವಂತೆ ಕರೆ ನೀಡಿದರು.