ಬ್ಯಾಲೆಟ್ ಪೇಪರ್ ಕಳ್ಳ ಮತದಾನದ ರಹಸ್ಯ ಬಿಚ್ಚಿಟ್ಟ ಪರಮೇಶ್ವರ್; ಕಾಂಗ್ರೆಸ್ EVM ಬೇಡ ಎನ್ನಲು ಇದೇ ಕಾರಣವೆಂದ ಜೆಡಿಎಸ್!
April 19, 2024
ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ತುಮಕೂರಿನಲ್ಲಿ ನಡೆದ ಯಾದವ ಸಮುದಾಯದ ಸಭೆಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr G Parameshwara) ಅವರು ಈ ಹಿಂದಿನ ಬ್ಯಾಲೆಟ್ ಮತದಾನ (Ballot paper voting) ಹಾಗೂ ಈಗಿನ ಇವಿಎಂ ಮತದಾನದ (EVM Voting) ಬಗ್ಗೆ ಸ್ಮರಿಸುತ್ತಾ ಆಡಿದ ಮಾತುಗಳು ಈಗ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಈಡು ಮಾಡಿದ್ದಲ್ಲದೆ, ವೈರಲ್ (Video Viral) ಆಗಿದೆ. ಜತೆಗೆ, ಕಾಂಗ್ರೆಸ್ ಪಕ್ಷವನ್ನು ಮುಜುಗರಕ್ಕೀಡು ಮಾಡಿದೆ. “ಈ ಹಿಂದೆ ಬ್ಯಾಲೆಟ್ ಪೇಪರ್ ಇದ್ದಾಗ ಒಬ್ರೋ ಇಬ್ರೋ ಕುಳಿತುಕೊಂಡು ಊರವರೆಲ್ಲರ ವೋಟು ಹಾಕುತ್ತಿದ್ದರು” ಎಂಬ ಪರಮೇಶ್ವರ್ ಹೇಳಿಕೆ ಈಗ ಸಖತ್ ವೈರಲ್ ಆಗಿದೆ. ಈ ವಿಡಿಯೊವನ್ನು ಜೆಡಿಎಸ್ ರಾಜ್ಯ ಘಟಕವು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದು, ಇವಿಎಂ ಬದಲು ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕಾಂಗ್ರೆಸ್ ಆಗ್ರಹಿಸುತ್ತಿರುವುದು ಇದೇ ಕಾರಣಕ್ಕೆ ಎಂದು ಕಿಡಿಕಾರಿದೆ
Tags
