31 ತಿಂಗಳ ಬಳಿಕ ಸಿಎಂ ಆಗಿಯೇ ವಿಧಾನಸಭೆ ಪ್ರವೇಶಿಸಿದ ಚಂದ್ರಬಾಬು ನಾಯ್ಡು!
June 21, 2024
ತೆಲುಗುದೇಶಂ ಪಕ್ಷದ (TDP) ಮುಖ್ಯಸ್ಥ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು (Chandrababu Naidu) ಅವರ 31 ತಿಂಗಳ ಶಪಥವು ಶುಕ್ರವಾರ ಅಂತ್ಯಗೊಂಡಿದೆ. “ನಾನು ಮುಖ್ಯಮಂತ್ರಿಯಾಗಿಯೇ ಮತ್ತೆ ವಿಧಾನಸಭೆ ಪ್ರವೇಶಿಸುವೆ” ಎಂಬುದಾಗಿ 31 ತಿಂಗಳ ಹಿಂದೆ ಪ್ರತಿಜ್ಞೆ ಮಾಡಿ ವಿಧಾನಸಭೆಯಿಂದ ಹೊರನಡೆದಿದ್ದ ಚಂದ್ರಬಾಬು ನಾಯ್ಡು, ಈಗ ಚುನಾವಣೆಯಲ್ಲಿ ಗೆದ್ದು, ಮುಖ್ಯಮಂತ್ರಿಯಾಗಿಏ ಶುಕ್ರವಾರ (ಜೂನ್ 21) ವಿಧಾನಸಭೆ ಪ್ರವೇಶಿಸಿದ್ದಾರೆ.
ಆಂದ್ರಪ್ರದೇಶದಲ್ಲಿ ಟಿಡಿಪಿ ಸರ್ಕಾರ ರಚನೆಯಾಗಿದ್ದು, ನೂತನ ಸರ್ಕಾರ ರಚನೆಯಾದ ಬಳಿಕ ಮೊದಲ ಅಧಿವೇಶನ ನಡೆಯಿತು. ಚಂದ್ರಬಾಬು ನಾಯ್ಡು ಅವರು ವಿಧಾನಸಭೆ ಪ್ರವೇಶಿಸುತ್ತಲೇ ಎಲ್ಲ ಸದಸ್ಯರು ಎದ್ದು ನಿಂತು ಗೌರವ ಸಲ್ಲಿಸಿದರು. ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಇದಾದ ಬಳಿಕ ಅವರು ಮುಖ್ಯಮಂತ್ರಿಯಾಗಿ ಮೊದಲ ಭಾಷಣ ಮಾಡಿದರು. ರಾಜ್ಯದ ಅಭಿವೃದ್ಧಿಗಾಗಿ ಶ್ರಮಿಸುವೆ ಎಂಬುದಾಗಿ ತಿಳಿಸಿದರು. ಇದರೊಂದಿಗೆ 31 ತಿಂಗಳ ಹಿಂದೆ ಮಾಡಿದ ಪ್ರತಿಜ್ಞೆಯನ್ನು ಅವರು ಈಡೇರಿಸಿದ್ದಾರೆ.
Tags
