ಹಿಂದೂ ದೇವರ ಅವಹೇಳನಕಾರಿ ನಾಟಕ; ಐಐಟಿ ವಿದ್ಯಾರ್ಥಿಗಳಿಗೆ ದಂಡ

Waves of Karnataka


 ರಾಮ ಮತ್ತು ಸೀತೆ ಹಿಂದೂ(Hindu)ಗಳ ಆರಾಧ್ಯ ದೇವರು. ಹಾಗಾಗಿ ಈ ದೇವರ ಹೆಸರಿಗೆ ಅವಮಾನ ಮಾಡಿದರೆ ಯಾರೂ ಸುಮ್ಮನೆ ಇರುವುದಿಲ್ಲ. ಆದರೆ ಇದೀಗ ಐಐಟಿ ಬಾಂಬೆಯಲ್ಲಿ (IIT Bombay) ಹಿಂದೂ ದೇವರಿಗೆ ಅವಹೇಳನ ಮಾಡುವಂತಹ ನಾಟಕವಾಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ (Student) ದಂಡ ವಿಧಿಸಲಾಗಿದೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಬಾಂಬೆಯ ಬಯಲು ರಂಗಮಂದಿರದಲ್ಲಿ ಈ ವರ್ಷ ಮಾರ್ಚ್ 31ರಂದು ನಡೆದ ಇನ್‌ಸ್ಟಿಟ್ಯೂಟ್‌ನ ಪರ್ಫಾರ್ಮಿಂಗ್ ಆರ್ಟ್ಸ್ ಫೆಸ್ಟಿವಲ್‌ನಲ್ಲಿ “ರಾಹೋವನ್” ಶೀರ್ಷಿಕೆಯ ನಾಟಕದಲ್ಲಿ ವಿದ್ಯಾರ್ಥಿಗಳು ರಾಮಾಯಣದ ಕಥಾ ಹಂದರವನ್ನು ಹೊಂದಿರುವ ನಾಟಕವಾಡಿದ್ದರು. ಇದರಲ್ಲಿ ಹಿಂದೂ ಧರ್ಮಕ್ಕೆ ಅಗೌರವ ತೋರಿದಲ್ಲದೇ ರಾಮ ಮತ್ತು ಸೀತೆಯನ್ನು ಅವಹೇಳನ ಮಾಡಿದ್ದರು.