ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಮಿತ್ರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಶಿವಸೇನೆ(ಯುಬಿಟಿ) ನಾಯಕ ಸಂಜಯ್ ರಾವತ್ ಅವರು, ಮಿತ್ರಪಕ್ಷಗಳ ಬೆಂಬಲವಿಲ್ಲದೆ ಗೆಲ್ಲಬಹುದು ಎಂದು ಅತ್ಯಂತ ಹಳೆ ಪಕ್ಷ ನಂಬಿದೆ ಎಂದು ಬುಧವಾರ ಟೀಕಿಸಿದ್ದಾರೆ.
ಸೇನಾ(ಯುಬಿಟಿ) ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ, ಕಾಂಗ್ರೆಸ್ "ಗೆಲುವಿನ ಪಂದ್ಯವನ್ನು ಸೋಲಿನ ಪಂದ್ಯವಾಗಿ ಪರಿವರ್ತಿಸಿದೆ" ಮತ್ತು 'ಕೈ' ಸೋಲಿಗೆ "ಅತಿಯಾದ ಆತ್ಮವಿಶ್ವಾಸ" ಹಾಗೂ ಸ್ಥಳೀಯ ನಾಯಕರ "ಅಹಂಕಾರ" ಕಾರಣ ಎಂದು ರಾವತ್ ಹೇಳಿದ್ದಾರೆ.
ಸಂಪಾದಕೀಯವು, ವಿಶೇಷವಾಗಿ ಹರಿಯಾಣ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ಟೀಕಿಸಿದ್ದು, ಅಭ್ಯರ್ಥಿ ಆಯ್ಕೆಯಲ್ಲಿ ಕುಮಾರಿ ಸೆಲ್ಜಾ ಅವರಂತಹ ಪ್ರಮುಖ ವ್ಯಕ್ತಿಗಳನ್ನು ಕಡೆಗಣಿಸಲಾಗಿದೆ ಎಂದು ಹೇಳಿದೆ.
