ವ್ಯವಸಾಯ ಭೂಮಿ'ಯಲ್ಲಿ 'ಫಾರ್ಮ್ ಹೌಸ್‌' ನಿರ್ಮಾಣಕ್ಕೆ ಸರ್ಕಾರದಿಂದ ಹೊಸ ರೂಲ್ಸ್ ಕಡ್ಡಾಯ.!

Waves of Karnataka


 ಕೃಷಿ ಭೂಮಿಯಲ್ಲಿ ಫಾರ್ಮ್ ಹೌಸ್ ನಿರ್ಮಿಸಲು ಇಚ್ಛಿಸುವ ರೈತರು ಮತ್ತು ಭೂಮಾಲೀಕರಿಗೆ ಕರ್ನಾಟಕ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವೆಂದು ಸರ್ಕಾರವು ತಿಳಿಸಿದೆ. ಕಂದಾಯ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ, ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ 95(1)ನೇ ನಿಯಮದಡಿಯಲ್ಲಿ ರೈತರು ತಮ್ಮ ಕೃಷಿ ಭೂಮಿಯ ಒಟ್ಟು ವಿಸ್ತೀರ್ಣದಲ್ಲಿ ಗರಿಷ್ಠ ಶೇಕಡಾ 10ರಷ್ಟು ಪ್ರದೇಶದಲ್ಲಿ ಮಾತ್ರ ಫಾರ್ಮ್ ಹೌಸ್ ನಿರ್ಮಿಸಬಹುದು.

ಫಾರ್ಮ್ ಹೌಸ್‌ನ ಉದ್ದೇಶ ಮತ್ತು ನಿರ್ಬಂಧಗಳು

ಫಾರ್ಮ್‌ ಹೌಸ್‌ಗಳನ್ನು ರೈತರು ಮತ್ತು ಅವರ ಕುಟುಂ ನಿವಾಸ ಅಥವಾ ಕೃಷಿ ಸಾಮಗ್ರಿಗಳನ್ನು ಸಂಗ್ರಹಿಸಿಡಲು ಮಾತ್ರ ಬಳಸಬೇಕು. ಇದನ್ನು ವಾಣಿಜ್ಯ ಉದ್ದೇಶಗಳಿಗೆ ಬಾಡಿಗೆಗೆ ನೀಡಲು ಅಥವಾ ಇತರೆ ಲಾಭದಾಯಕ ಚಟುವಟಿಕೆಗಳಿಗೆ ಬಳಸುವಂತಿಲ್ಲ. ಈ ನಿಯಮಗಳ ಉಲ್ಲಂಘನೆಯಾದಲ್ಲಿ ಕಾನೂನುಬದ್ಧ ಕ್ರಮ ಕೈಗೊಳ್ಳಲಾಗುವುದು.