ಸಿದ್ದರಾಮಯ್ಯ ದೆಹಲಿ ಯಾತ್ರೆ: ರಾಜ್ಯ ನಾಯಕರಿಗೆ ಹೈಕಮಾಂಡ್ ಬಿಗ್ ಶಾಕ್! ಸಭೆಗಳಿಗೆ ಸದ್ಯಕ್ಕಿಲ್ಲ ಅವಕಾಶ

Waves of Karnataka


 ನವೆಂಬರ್ 15 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಲಿದ್ದು, ಅದಕ್ಕೆ ಮುಂಚಿತವಾಗಿ ಯಾವುದೇ ನಾಯಕರೊಂದಿಗೆ ಸಭೆ ನಡೆಸಲು ಅವಕಾಶ ನೀಡಲಾಗುವುದಿಲ್ಲ ಎಂದು ಪಕ್ಷದ ಹೈಕಮಾಂಡ್ ತಿಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ದೇಶನವು ಕರ್ನಾಟಕದ ಎಲ್ಲ ನಾಯಕರಿಗೆ ಅನ್ವಯಿಸಲಿದ್ದು, ಸದ್ಯಕ್ಕೆ ದೆಹಲಿಯಲ್ಲಿ ತಮ್ಮ ಭೇಟಿಗೆ ಸಮಯ ಕೇಳದಂತೆ ಹೈಕಮಾಂಡ್ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಸಿದ್ದರಾಮಯ್ಯ ಅವರು ದೆಹಲಿಗೆ ಪ್ರಯಾಣಿಸಿದ ವೇಳೆ, ಹಿರಿಯ ನಾಯಕರೊಂದಿಗೆ ಭೇಟಿಗೆ ಸಮಯ ಕೋರಿದ್ದಾರೆ. ಆದಾಗ್ಯೂ, ಹೈಕಮಾಂಡ್ ಮಾತುಕತೆಯ 'ಅಗತ್ಯವಿಲ್ಲ' ಮತ್ತು ಈ ಹಂತದಲ್ಲಿ ಯಾವುದೇ ನಾಯಕರ ಭೇಟಿಗೆ ಅವಕಾಶ ನೀಡಲಾಗುವುದಿಲ್ಲ ಎಂದಿರುವುದಾಗಿ ಮೂಲಗಳು ತಿಳಿಸಿವೆ.