, "'ಕ್ರಾಂತಿ' ಬಗ್ಗೆ ಮಾಧ್ಯಮಗಳಿಗೆ ಹರಿಪ್ರಸಾದ್ ಟ್ವಿಸ್ಟ್: ಉತ್ತರ ಸಿಗುವುದು ಜನವರಿ 14ರ ನಂತರ!"

Waves of Karnataka


 ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ನಲ್ಲಿ ರಾಜಕೀಯ ಪ್ರಕ್ಷುಬ್ಧತೆಯ ಬಗ್ಗೆ ಇರುವ ಊಹಾಪೋಹಗಳನ್ನು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಎಂಎಲ್‌ಸಿ ಬಿ ಕೆ ಹರಿಪ್ರಸಾದ್ ತಳ್ಳಿಹಾಕಿದ್ದಾರೆ. ಮಂಗಳೂರಿನಲ್ಲಿ ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಅವರ ಭೇಟಿಯ ಸಂದರ್ಭದಲ್ಲಿ ರಾಜಕೀಯದ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ಹೇಳಿದ್ದಾರೆ.

ಕ್ರಾಂತಿಯ ಬಗ್ಗೆ ಮಾತನಾಡುತ್ತಿರುವುದು ಮಾಧ್ಯಮಗಳೇ. ಸಂಕ್ರಾಂತಿ (ಜನವರಿ 14) ಬರಲಿ, ನಂತರ ನಾವು ಮಾತನಾಡೋಣ ಎಂದು ಹರಿಪ್ರಸಾದ್ ಮಂಗಳೂರಿನಲ್ಲಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೇಳಿದರು.

ಮುಖ್ಯಮಂತ್ರಿ ಬದಲಾವಣೆಯ ವದಂತಿಗಳ ಬಗ್ಗೆ ಕೇಳಿದಾಗ, ಅವರು, ನಿಮಗೆ ಯಾರು ಹೇಳಿದರು, ಅಂತಹ ಯಾವುದೇ ವಿಷಯವಿದ್ದರೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆ ವಿಷಯ ಹಳೆಯದು. ಹೊಸದೇನಾದರೂ ಇದ್ದರೆ ಕೇಳಿ ಎಂದರು