ಲೋಕಸಭಾ ಚುನಾವಣೆ (Lok Sabha Election 2024) ಹೊಸ್ತಿಲಲ್ಲಿ ಮತ್ತೆ ಕುಟುಂಬ ರಾಜಕಾರಣ (Family Politics) ಸದ್ದು ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ (JP Nadda) ಅವರು ಇಂಡಿಯಾ ಒಕ್ಕೂಟದ (I.N.D.I.A.) ಕುರಿತು ವ್ಯಂಗ್ಯ ಮಾಡಿದ್ದಾರೆ. ಈ ಮೈತ್ರಿ ಒಕ್ಕೂಟದಲ್ಲಿ ಕುಟುಂಬ ರಾಜಕಾರಣವೇ ಇದ್ದು, ತಮ್ಮ ತಮ್ಮ ಕುಟುಂಬದವರಿಗೆ ಮಣೆ ಹಾಕುತ್ತಲೇ ಬರಲಾಗುತ್ತಿದೆ. ಎಲ್ಲವನ್ನೂ ಇವರ ಕುಟುಂಬದವರೇ ಪಡೆದುಕೊಂಡರೆ ಉಳಿದವರು ಏನು ಗಂಟೆ ಬಾರಿಸಬೇಕಾ ಎಂದು ಪ್ರಶ್ನೆ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪರ ಮತಯಾಚನೆ ಸಮಾರಂಭದಲ್ಲಿ ಮಾತನಾಡಿದ ಜೆ.ಪಿ. ನಡ್ಡಾ, ಫಾರುಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಒಂದೇ ಕುಟುಂಬದವರು. ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಒಂದೇ ಕುಟುಂಬದವರು, ಕೆಸಿಆರ್, ಕೆಕೆಆರ್ ಒಂದೇ ಕುಟುಂಬ, ಶರದ್ ಪವಾರ್, ಸುಪ್ರಿಯಾ ಸುಳೆ ಒಂದೇ ಕುಟುಂಬ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಒಂದೇ ಕುಟುಂಬದವರಾಗಿದ್ದಾರೆ. ಇದು ಇಂಡಿ ಅಲಯನ್ಸ್ ಆಗಿದ್ದು, ಅಧಿಕಾರ ಕುಟುಂಬದವರ ಕೈಯಲ್ಲೇ ಇದೆ. ಹಾಗಾದರೆ ಉಳಿದವರೇನು ಗಂಟೆ ಬಾರಿಸಬೇಕಾ? ಎಂದು ಪ್ರಶ್ನೆ ಮಾಡಿದರು.
ಇಂಡಿಯಾ ಒಕ್ಕೂಟದವರಿಂದ ಕುಟುಂಬ ರಾಜಕಾರಣ, ಉಳಿದವರು ಗಂಟೆ ಬಾರಿಸಬೇಕಾ? ಜೆ.ಪಿ. ನಡ್ಡಾ ಖಡಕ್ ಪ್ರಶ್ನೆ
April 21, 2024
Tags
