ಮೋದಿ ತೆರಳುವಾಗ ಚೆಂಬು ಪ್ರದರ್ಶನ; ನಲಪಾಡ್‌ ಸೇರಿ ಹಲವರು ವಶಕ್ಕೆ

Waves of Karnataka


 ನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು (Modi in Karnataka) ಬಿಜೆಪಿ ವಿಜಯ ಸಂಕಲ್ಪ ಸಮಾವೇಶ ಮುಗಿಸಿ ತೆರಳುವಾಗ ಭದ್ರತಾ ಲೋಪ ಉಂಟಾಗಿದೆ. ಅರಮನೆ ಮೈದಾನದಿಂದ ಎಚ್‌ಕ್ಯುಟಿಸಿ ಹೆಲಿಪ್ಯಾಡ್‌ಗೆ ತೆರಳುವಾಗ ಮೇಕ್ರಿ ಸರ್ಕಲ್‌ನಲ್ಲಿ ರಾಜ್ಯ ಯುವ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹಾಗೂ ಬೆಂಬಲಿಗರು ರಸ್ತೆಗೆ ನುಗ್ಗಿ ಚೆಂಬು ಪ್ರದರ್ಶಿಸಿದ್ದಾರೆ. ಹೀಗಾಗಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.