ಲೇಡಿ ಸೂಪರ್ ಸ್ಟಾರ್ ನಯನತಾರನ ಹವಾ ಬಾಲಿವುಡ್ ನಲ್ಲೂ ಶುರುವಾಯಿತು ಜವಾನ್ ಚಿತ್ರದ ಮೂಲಕ
September 08, 2023
ದಕ್ಷಿಣ ಭಾರತದಲ್ಲಿ 'ಲೇಡಿ ಸೂಪರ್ ಸ್ಟಾರ್' ಎಂದೇ ಫೇಮಸ್ ಆಗಿರುವ ನಟಿ ನಯನತಾರಾ ಅವರು ಇದೀಗ ಇದೇ ಮೊದಲ ಬಾರಿಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ನರ್ಮದಾ ಎಂಬ ಪಾತ್ರ ಮಾಡುವ ಮೂಲಕ ಬಿಟೌನ್‌ನಲ್ಲೂ ತಮ್ಮ ಹವಾ ತೋರಿಸಿದ್ದಾರೆ ನಯನತಾರಾ. ಜವಾನ್ ಸಿನಿಮಾವು ಸೆ.7ರಂದು ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ತೆರೆಗೆ ಬಂದಿದ್ದು ವಿಶ್ವಾದ್ಯಂತ 10 ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಜವಾನ್‌ನಲ್ಲಿ ನಯನತಾರಾ ನಿಭಾಯಿಸಿರುವ ನರ್ಮದಾ ಎಂಬ ಖಡಕ್ ಪೊಲೀಸ್ ಅಧಿಕಾರಿ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಿದೆ. ಉತ್ತರ ಭಾರತದ ಆಡಿಯೆನ್ಸ್ ಕೂಡ ನಯನತಾರಾ ಚಾರ್ಮ್‌ಗೆ ಫಿದಾ ಆಗಿದ್ದಾರೆ.
ಇದರ ಜೊತೆಗೆ ಈ ಸಿನಿಮಾ ಕೂಡ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಮಾಯಿ ಮಾಡುತ್ತಿದೆ. ಬಹುತೇಕ ಎಲ್ಲ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವ ಜವಾನ್ ಸಿನಿಮಾವು ಮೊದಲ ದಿನ ಭಾರತದಲ್ಲಿ 65.50 ಕೋಟಿ ರೂ. ಗಳಿಕೆ ಮಾಡಿದೆ. ಆ ಮೂಲಕ ಮೊದಲ ಹಿಂದಿ ಸಿನಿಮಾದಲ್ಲೇ ನಯನತಾರಾ ಭರ್ಜರಿ ಸಕ್ಸಸ್ ಪಡೆದುಕೊಂಡಿದ್ದಾರೆ.
Tags
.jpeg)